ಪೋಪ್ ಫ್ರಾನ್ಸಿಸ್ ಅವರು ನೀಡಿದ ಕ್ರಿಸ್ಮಸ್ ಸಂದೇಶವು (ಡಿಸೆಂಬರ್ ೨೪, ೨೦೧೩) ಮೃದು ಶಬ್ದಗಳಿಂದ ಕೂಡಿ ಅಧ್ಯಾತ್ಮದಂತೆ ಕಂಡರೂ ಅದು ಕ್ರಿಸ್ತನಿಗೆ ನಡೆದುಕೊಳ್ಳುವವರಿಗೆ ನೀಡಿರುವ ಸಂದೇಶವಾಗಿದ್ದು ಚರ್ಚಿನ ಮತಾಂತರದ ಕಾರ್ಯಕ್ರಮವನ್ನು ಮರೆಮಾಚಿದೆ. ವಿನಮ್ರ ನಡವಳಿಕೆಯ ಪೋಪ್ ನಾಸ್ತಿಕರಿಗೆ ಚರ್ಚಿನ ಪರಿಧಿಯೊಳಗೆ ಬರಲು ಆಹ್ವಾನಿಸಿದ್ದು ಕ್ರೈಸ್ತೇತರ ಜನರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅವರ ಗಡಸು ವ್ಯಕ್ತಿತ್ವವನ್ನು ಬಿಚ್ಚಿರಿಸಿದೆ. "ಕ್ರೈಸ್ತ ಜನರಿಗಷ್ಟೇ ಶಾಂತಿಯನ್ನು ದೇವರು ದಯಪಾಲಿಸುವ" ಎಂಬ ಅರ್ಥ ಬರುವ ಬೈಬಲ್ ನ ಲ್ಯುಕ್ ನಲ್ಲಿ ಬರುವ ವಾಕ್ಯವನ್ನು ಉದ್ಧರಿಸುವ ಮೂಲಕ ಈ ವರ್ಷದ ಸಂದೇಶದ ಧ್ವನಿಯನ್ನು ಪೋಪ್ ನಿಶ್ಚಯಿಸಿದ್ದಾರೆ.
ಕ್ರಿಸ್ಮಸ್ ಕ್ರಿಶ್ಚಿಯನ್ನರನ್ನು ಮತಾಂತರ ಮಾಡಲು ನಿರ್ದೇಶಿಸುತ್ತದೆ. ಅದಕ್ಕಾಗಿ ಪೋಪ್ ಕ್ರಿಶ್ಚಿಯನ್ನರನ್ನು ತಮ್ಮ ಜೀವನ ಕೊಡಲು ಕೇಳಿದ್ದಾರೆ. ಶಾಂತಿಯ ಸಂದೇಶವೆಂದು ಕ್ರಿಸ್ಮಸ್ ಸಂದೇಶವನ್ನು ಪೋಪ್ ಕರೆದಿದ್ದು, ಕ್ರಿಸ್ತನಿಂದ ಪ್ರಾರಂಭಗೊಂಡು ಚರ್ಚ್ ಗೆ ಪ್ರತಿದಿನವೂ ನಡೆದುಕೊಳ್ಳುವುದನ್ನೇ ಶಾಂತಿ ಎಂದು ಕರೆಯಲಾಗಿದೆ.
ಈ ಬಾರಿ ಪೋಪ್ ಫ್ರಾನ್ಸಿಸ್ ಬಾಲ ಯೇಸುವಿನ ಪ್ರತಿಮೆಯನ್ನು ಎತ್ತಿಕೊಳ್ಳುವುದರ ಮೂಲಕ ಜಗತ್ತಿನ ಕ್ರೈಸ್ತರಿಗೆ ಮತ್ತೊಂದು ವಿಗ್ರಹದ ಪ್ರಾಮುಖ್ಯವನ್ನು ಸಾರಿದರು. ಅದರ ಮೂಲಕ ಕ್ರೈಸ್ತ ಮತಾಂತರಿಗಳಿಗೆ ಸುಲಭವಾಗಿ ಸಿಗುವ ಜರ್ಝರಿತರಾದ ಮಕ್ಕಳ ಬಗ್ಗೆ ಗಮನ ಹರಿಸಲು ತಿಳಿಸಿದರು. ಹಾಗೆ ಮಾಡುವಾಗ ವೃದ್ಧರ, ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಎಚ್ಚರಿಕೆ ನೀಡಿದರು. ಪೋಪ್ ಹೆಂಗಸರ ಬಗ್ಗೆಯೂ ಮಾತನಾಡಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯಕ್ಕೊಳಗಾದ ಹೆಂಗಸರನ್ನು ಪ್ರಸ್ತಾಪಿಸಿದರು. ದೌರ್ಜನ್ಯಕ್ಕೊಳಗಾದ ಹೆಂಗಸರ ಹೆಸರಿನಲ್ಲಿ ಇಸ್ಲಾಂ ಮತ್ತು ಹಿಂದೂ ಕುಟುಂಬಗಳಲ್ಲಿ ಈಗಾಗಲೇ ನಡೆಯುತ್ತಿರುವ ಹಸ್ತಕ್ಷೇಪಕ್ಕೆ ಕುಮ್ಮಕ್ಕು ಕೊಡುವ ಚರ್ಚಿನ ಉದ್ದೇಶ ಈ ಸಂದೇಶದ ಹಿಂದೆ ಇದೆ ಎಂದು ನಂಬಲಾಗಿದೆ.
ಸಿರಿಯಾ, ಮಧ್ಯ ಆಫ್ರಿಕಾ, ದಕ್ಷಿಣ ಸುಡಾನ್, ನೈಜೀರಿಯಾ, ಇಸ್ರೇಲಿ-ಪ್ಯಾಲೆಸ್ಟೈನ್, ಮತ್ತು ಇರಾಕ್ - ಇಲ್ಲಿ ಶಾಂತಿಗಾಗಿ ಪೋಪ್ ಪ್ರಾರ್ಥಿಸಿದರು. ಪ್ರಾರ್ಥನೆಯು ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳನ್ನಷ್ಟೇ ಒಳಗೊಂಡಿದ್ದು ಮುಸ್ಲಿಮರ ಬಗ್ಗೆ ಚರ್ಚಿಗಿರುವ ಗಮನವನ್ನು ಪ್ರತಿನಿಧಿಸಿತು.
ಕ್ಯಾಥೊಲಿಕ್ ಚರ್ಚಿನ ಮುಖ್ಯಸ್ತನಾಗಿ ಪೋಪ್ ಫ್ರಾನ್ಸಿಸ್ ಇಡೀ ಜಗತ್ತನ್ನು ಕ್ರಿಸ್ತನ ಬಳಿಗೆ ತರುವ ತಮ್ಮ ಹಠವನ್ನು ಪುನರುಚ್ಚರಿಸಿದರು. ಕ್ರೈಸ್ತ ಪರಿಭಾಷೆಯ ಇತಿಮಿತಿಯೊಳಗೆ, ಮತ್ತು ಸಂಕುಚಿತ ದೃಷ್ಟಿಕೋನದಲ್ಲೇ ಪೋಪ್ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಪಾಶ್ಚಿಮಾತ್ಯ ಮಾಧ್ಯಮವು, ಯಥಾ ಪ್ರಕಾರ, ಸಂದೇಶವನ್ನು ಧನಾತ್ಮಕವಾಗಿ ಪ್ರಚುರಗೊಳಿಸಿ ಸುಳ್ಳು ಭರವಸೆಯನ್ನು ಜನರಲ್ಲಿ ಮೂಡಿಸಿದೆ. ಇಸ್ಲಾಂ ಮತ್ತು ಹಿಂದೂ ಮಾಧ್ಯಮಗಳು ಸಂದೇಶದ ಒಳ ಅರ್ಥಗಳನ್ನು ವಿಶ್ಲೇಶಿಸದೇ ಸುದ್ದಿಯನ್ನೇ ಕಡೆಗಣಿಸಿವೆ.
No comments:
Post a Comment